Thursday, 16 March 2023

D ಜೀವಸತ್ವದ ಕೊರತೆ

 (Vit D Deficiency)  


ಎಲ್ಲಾ ವಯಸ್ಸಿನವರಿಗೂ ಬಾಧಿಸುವ ಸರ್ವೇ ಸಾಮಾನ್ಯ ಖಾಯಿಲೆಯಾಗಿದೆ. D ಜೀವಸತ್ವದ ಕೊರತೆಯು ಮೂಳೆಗಳನ್ನು ಬಲಹೀನಗೊಳಿಸುವುದರ ಜೊತೆಗೆ ಮಾಂಸಖಂಡಗಳನ್ನು ಕೂಡಾ ಬಲಹೀನ ಮಾಡುತ್ತದೆ.

          ಮೂಳೆಗಳ ಬೆಳವಣಿಗೆಗೆ D ಜೀವಸತ್ವವು ಅತೀ ಅವಶ್ಯಕವಾಗಿದೆ. ಹಾಗೆಯೇ ಮನುಷ್ಯನ ನರವ್ಯೂಹಗಳ ಕೆಲಸ ಕಾರ್ಯಗಳಿಗೆ ಕೂಡಾ D ಜೀವಸತ್ವ ಬೇಕಾಗಿದೆ. ಇದರ ಜೊತೆಗೆ ಇದು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಸಮತೋಲನದಲ್ಲಿ ಇರಿಸುವುದಕ್ಕೆ ಅತೀ ಮುಖ್ಯವಾಗಿದೆ.

D ಜೀವಸತ್ವವು ಯಾಕೆ ಅಷ್ಟು ಪ್ರಾಮುಖ್ಯತೆ ಪಡೆದಿದೆ.?

ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ‘ಡಿ’ ಜೀವಸತ್ವವು ಅತೀ ಅವಶ್ಯಕವಾಗಿದೆ.

ರಕ್ತದಲ್ಲಿನ ಕ್ಯಾಲ್ಸಿಯಂ ಅಂಶವನ್ನು ಸಮತೋಲನಗೊಳಿಸಲು ಮತ್ತು ಮೂಳೆಗಳ ಬೆಳವಣಿಗೆಗೆ ಕೂಡಾ ಇದು ಅವಶ್ಯಕವಾಗಿದೆ. ವಿಟಮಿನ್ ಡಿ ಜೀವಸತ್ವದಿಂದಾಗಿ ನಮ್ಮ ದೇಹವು ಕ್ಯಾಲ್ಸಿಯಂ ಮತ್ತು ಪಾಸ್ಪರಸ್‌ಗಳನ್ನು ಹೀರಿಕೊಳ್ಳುತ್ತದೆ. ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ.

ವಿಟಮಿನ್ ‘ಡಿ’ ಯ ಕೊರತೆಯು ಮಕ್ಕಳಲ್ಲಿ ರಿಕೆಟ್ಸ್ ಎಂಬ ಖಾಯಿಲೆಗೆ ಕಾರಣವಾಗುತ್ತದೆ. ಹಾಗೂ ಇದರಲ್ಲಿ ಮೂಳೆಗಳ ಬೆಳವಣಿಗೆಯೂ ಕುಂಠಿತಗೊಳ್ಳುತ್ತದೆ. ದೊಡ್ಡವರಲ್ಲಿ ಮೂಳೆಗಳ ಸಾಂದ್ರತೆಯು ಕಡಿಮೆಯಾಗುವುದರ ಜೊತೆಗೆ ಮಾಂಸಖಂಡಗಳ ಕ್ಷೀಣತೆ, ಸುಸ್ತು ಹಾಗೂ ಮಾನಸಿಕ ಆರೋಗ್ಯವನ್ನು ಕೂಡಾ ಹದಗೆಡಿಸುತ್ತಿದೆ. ಇವೆಲ್ಲಾ ಕಾರಣಗಳಿಂದ ಮೂಳೆ ಮುರಿತ ಹಾಗೂ ಬೆನ್ನು ನೋವಿನಿಂದ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

 

ವಿಟಮಿನ್ D ಜೀವಸತ್ವವು ಕಡಿಮೆ ಆಗಲು ಕಾರಣಗಳೇನು.?

  •  ಕರುಳಿಗೆ ಸಂಬಂಧಪಟ್ಟ ಖಾಯಿಲೆಗಳು
  •  ಸ್ಥೌಲ್ಯತ್ವ
  •  ಕಿಡ್ನಿ ಹಾಗೂ ಯಕೃತ್ ಸಂಬಂಧಿತ ಖಾಯಿಲೆಗಳು
  • ಸ್ಥೌಲ್ಯಹರ ಶಸ್ತ್ರಚಿಕಿತ್ಸೆಗಳು
  •  ಅಪಸ್ಮರ ಔಷಧಿಗಳು, ಸ್ಟಿರಾಯ್ಡ್, ಟಿಬಿ ಔಷಧಿಗಳು
  • ಸೂರ್ಯನ ಬೆಳಕಿಗೆ ಹೋಗದಿರುವುದು.
  • ಅತಿಯಾದ AC ಬಳಕೆ
  • ಗಾಢವಾದ ಚರ್ಮದ ಬಣ್ಣ ಉಳ್ಳವರಲ್ಲಿ
  • 65 ವರ್ಷ ವಯಸ್ಸಿನ ನಂತರದವರಲ್ಲಿ


ಚಿಕಿತ್ಸೆ 


  • ಸೂರ್ಯನ ಬೆಳಕಿನಲ್ಲಿ ದಿನವೂ ಕುಳಿತುಕೊಳ್ಳುವುದು ಅತೀ ಮುಖ್ಯವಾಗಿದೆ. ಸೂರ್ಯನ ಬೆಳಕಿನಲ್ಲಿ ‘ಡಿ’ ಜೀವಸತ್ವವು ಅತೀ ಹೇರಳವಾಗಿದ್ದು ಇದನ್ನು ನಮ್ಮ ದೇಹವು ಹೀರಿಕೊಳ್ಳುತ್ತದೆ.
  • ಹಾಲು ಹಾಗೂ ಹಾಲಿನ ಉತ್ಪನ್ನಗಳು ಸೇವಿಸುವುದು.
  • ಮೀನು ಹಾಗೂ ಮೊಟ್ಟೆ ಸೇವಿಸುವುದು.
  • ಸೋಯಾ, ಕಿತ್ತಳೆ ಹಾಗೂ ಬಾದಾಮಿಯನ್ನು   ತೆಗೆದುಕೊಳ್ಳುವುದು.

 

ಆಯುರ್ವೇದ ಹಾಗೂ‘ಡಿ’ ಜೀವಸತ್ವದ ಕೊರತೆ.!

ಆಯುರ್ವೇದದಲ್ಲಿ ‘ಡಿ’ ಜೀವಸತ್ವದ ಕೊರತೆಯನ್ನು ನೀಗಿಸಲು ಅಸ್ತಿಶೃಂಖಲಾ ವನ್ನು ಉಪಯೋಗಿಸಲಾಗುತ್ತದೆ. ಜೊತೆಗೆ ಬಲಾ ಎಂಬ ಸಸ್ಯವನ್ನು ಕೂಡಾ ಉಪಯೋಗಿಸಲಾಗುತ್ತದೆ.


ವಿಟಮಿನ್  ‘ಡಿ’ ಜೀವಸತ್ವವಿರುವ ಪದಾರ್ಥಗಳು 


ಅಮೃತಬಳ್ಳಿ, 

ತಿಲ (ಎಳ್ಳು), 

ನುಗ್ಗೆ, 

ಬಸಳೆಸೊಪ್ಪು, ಕಿತ್ತಳೆ