Friday, 13 April 2012


ಸಂಪಿಗೆ ಹೂವಿನ ಕಮ್ಮೆಲರು.......................


ನನ್ನ ಕ್ಲಿನಿಕ್ ಮುಂದಿರುವ ಸಂಪಿಗೆ ಮರ ವರ್ಷ ಪೂರ್ತಿ ಹೂವಿನಿಂದ ನಳನಳಿಸುತ್ತಿರುತ್ತದೆ. ಅದನ್ನು ನೋಡಿದಾಗೆಲ್ಲ ಹೂವನ್ನು ದೇವರಿಗೆರಿಸುವಾಸೆ. ಅದರ ಸುವಾಸನೆ ನನ್ನ ಕ್ಲಿನಿಕ್ ಎಲ್ಲ ತುಂಬಿ ಬಂದವರೆಲ್ಲ ಅದರ ಕಡೆಗೆ ಆಸೆ ಕಣ್ಣಿನಿಂದ ನೋಡುವಾಗ ನನಗೊಂದು ರೀತಿಯ ಖುಷಿ.
ಇವತ್ತು ಮುಂಜಾನೆ ಕ್ಲಿನಿಕ್ ಬಂದಾಗ ನನ್ನ ಹುಡುಗಿ ಚಂದು ಹೇಳಿದಳು ..ಮ್ಯಾಡಮ್ ಇವತ್ತು ಸಂಪಿಗೆ ಹೂವು ಕೊಯ್ಯಲೆ ಬೇಕು. ಪಾಪ ಅಂತೂ ಇಂತೂ ಕಷ್ಟಪಟ್ಟು ಹರಸಾಹಸ ಮಾಡಿ ಮೂರು ಸಂಪಿಗೆ ಹೂಗಳನ್ನು ಕೊಯ್ದು ದೇವರಿಗೆ ಏರಿಸಿಯೆ ಬಿಟ್ಟಳು.
ನನಗೆ ಬರಿ ಆಸೆ ಅಷ್ಟೆ ಇತ್ತು ನಾನೆಂದು ಕರ್ಯಸಾಧನೆಯತ್ತ ಯೋಚಿಸಿಯೆ ಇಲ್ಲ. ಆದರೆ ಚಂದು ಬೇಕು ಎನಿಸಿದಾಕ್ಷಣ ಅದನ್ನು ಸಾಧಿಸಿ ತೋರಿಸಿದಳು.ಅವಳ ಕೆಲಸವನ್ನು ಕಂಡು ನಾನು ಸಮ್ತಸ ವ್ಯಕ್ತಪಡಿಸಿದಾಗ ಅವಳ ಮುಖದಲ್ಲಿ ಏನೋ ಸಾಧಿಸಿದ ಹೆಮ್ಮೆ , ಆದರೆ ನನ್ನ ಅಂತರಾಳದಲ್ಲಿ ಅವರ ಮುಂದೆ ನಾನೆಲ್ಲೊ ಚಿಕ್ಕವಳಾದೆ ಎಂದು ಅನಿಸುತ್ತಿದೆ.

No comments:

Post a Comment