Monday, 31 July 2023

ಸರ್ವಕಾಲಕ್ಕೂ ಬಾಧಿಸುವ ಖಾಯಿಲೆ ಕೆಮ್ಮು

 ಕೆಮ್ಮೆಂಬ ಕಿರಿಕಿರಿ 

ಕೆಮ್ಮು ಸರ್ವಕಾಲಕ್ಕೂ ಸರ್ವರಿಗೂ ಬಾಧಿಸುವ ಖಾಯಿಲೆ.    

ಈ ಕೆಮ್ಮಿಗೆ ಕಾರಣಗಳೇನು?

    1.      ಕೆಮ್ಮು ಒಂದು ಸಹಜ ಕ್ರಿಯೆ. ಗಂಟಲಿನಲ್ಲಿ ಏನಾದರೂ ಸಿಕ್ಕಿಕೊಂಡಾಗ ಕೆಮ್ಮು ಬರುತ್ತದೆ
    2.      ವೈರಸ್ ಬ್ಯಾಕ್ಟೀರಿಯಾಗಳಿಂದಲೂ ಕೆಮ್ಮು ಬರುತ್ತದೆ.
    3.      ಬೀಡಿ ಸಿಗರೇಟು ಸೇವನೆ
    4.      ದೀರ್ಘಕಾಲಿಕ ಉಬ್ಬಸದ ತೊಂದರೆ
    5.      ಧೂಳು ಹಾಗೂ ಕೆಲವು ಮಾಲಿನ್ಯಕಾರಕ ವಸ್ತುಗಳಿಂದ
    6.      ಕೆಲವೊಂದು ಆಲೋಪಥಿಕ ಔಷಧಗಳು
    7.      ಶ್ವಾಸಕೋಶದ ತೊಂದರೆಗಳಿಂದ
    8.      ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಿಂದ

 

ಕೆಮ್ಮಿಗೆ ಪರಿಹಾರವೇನು?
cough

ಮನೆ ಮದ್ದು

  •   ತುಳಸಿರಸ+ ಜೇನುತುಪ್ಪ
  •   ಹಸಿಶುಂಠಿರಸ + ಜೇನುತುಪ್ಪ
  •  ಈರುಳ್ಳಿರಸ+ಕಲ್ಲುಸಕ್ಕರೆ
  •   ಜ್ಯೇಷ್ಠಮಧು+ಜೇನುತುಪ್ಪ
  •   ವೀಳ್ಯದೆಲೆ ರಸ+ ಸೈಂಧವ ಲವಣ
  •   ಜೀರಿಗೆಪುಡಿ+ಬೆಲ್ಲ
  •   ಕಾಳುಮೆಣಸು+ಸೈಂಧವಲವಣ
  •   ದೊಡ್ಡಪತ್ರೆರಸ
  •   ಆಡುಸೋಗೆ ರಸ+ಜೇನುತುಪ್ಪ
  •   ಅಳಲೆಕಾಯಿ ಪುಡಿ ಬಿಸಿನೀರಿನ ಜೊತೆ
  •   ಹಿಪ್ಪಲಿ ಚೂರ್ಣ ಜೇನುತುಪ್ಪ ಜೊತೆ

ಆಯುರ್ವೇದ ಔಷಧಿಗಳು

ಕೆಮ್ಮಿನಲ್ಲಿ ಬೇರೆ ಬೇರೆ ರೀತಿಯ ಕೆಮ್ಮುಗಳಿವೆ, ಅದರಲ್ಲೂ ದೀರ್ಘಕಾಲದ ಕೆಮ್ಮು ಜೀವಕ್ಕೆ ಅಪಾಯ ತರುವ ಸಾಧ್ಯತೆಗಳು ಕೂಡಾ ಇವೆ.ಆಯುರ್ವೇದದಲ್ಲಿ, ಸೀತೋಪಲಾದಿ ಚೂರ್ಣ, ತಾಲಿಸಾದಿ ಚೂರ್ಣ, ಅಗಸ್ತ್ಯ ಹರಿತಕಿ ಲೇಹ್ಯ, ದಶಮೂಲ ಲೇಹ್ಯ, ವಾಸಕಾರಿಷ್ಟ, ಕರ್ಪೂರಾದಿ ಚೂರ್ಣ, ನಿಶಾಮಲಕೀ ಚೂರ್ಣ ಮೊದಲಾದವುಗಳನ್ನು ಉಪಯೋಗಿಸಲಾಗುತ್ತದೆ ಹಾಗೂ ಈ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವುದು ಉತ್ತಮ.

ಪಥ್ಯಾಪಥ್ಯಗಳು

ಎಣ್ಣೆ ಪದಾರ್ಥಗಳು, ಮೊಸರು, ಐಸ್‌ಕ್ರೀಂ ಹಾಗೂ ನಂಜಿನ ಪದಾರ್ಥಗಳು ವರ್ಜ್ಯ.

 

No comments:

Post a Comment